Index   ವಚನ - 1    Search  
 
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು* ಅದೆಂತೆಂದಡೆ: 'ಭಕ್ತಸ್ಯ ಮಂದಿರಂ ಗತ್ವಾ |ಭಿಕ್ಷಲಿಂಗಾರ್ಪಿತಂ ತಥಾ ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸೂತಕ ವರ್ಜಿತಃ ||' ಇಂತೆಂದುದಾಗಿ, ಕಾಣದುದನೆಚ್ಚರಿಸದೆ, ಕಂಡುದನು ನುಡಿಯದೆ, ಕಾಣದುದನು ಕಂಡುದನು ಒಂದೆ ಸಮವೆಂದು ಅರಿಯಬಲ್ಲರೆ ಕುಂಭೇಶ್ವರಲಿಂಗವೆಂಬೆನು.