Index   ವಚನ - 1    Search  
 
ಬಸವಣ್ಣನಿಂದ ಗುರು ಪ್ರಸಾದಿಯಾದೆನು. ಚೆನ್ನಬಸವಣ್ಣನಿಂದ ಲಿಂಗ ಪ್ರಸಾದಿಯಾದೆನು. ಪ್ರಭುದೇವರಿಂದ ಜಂಗಮ ಪ್ರಸಾದಿಯಾದೆನು. ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು. ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ ದಾಸಯ್ಯಪ್ರಿಯ ರಾಮನಾಥ.