ಪೂರಾಯ ಗಾಯ ತಾಗಿ
ನೊಂದೆನೆಂದರಿಯೆನಯ್ಯಾ,
ಇದ್ದೆನೆಂದರಿಯೆನಯ್ಯಾ,
ಸತ್ತೆನೆಂದರಿಯೆನಯ್ಯಾ,
ಕಾಯ ಪಲ್ಲಟವಾಯಿತ್ತು,
ಗುಹೇಶ್ವರಲಿಂಗ ಸ್ವಾಯತವಾಗಿ.
Transliteration Pūrāya gāya tāgi
nondenendariyenayyā,
iddenendariyenayyā,
sattenendariyenayyā,
kāya pallaṭavāyittu,
guhēśvaraliṅga svāyatavāgi.
Hindi Translation तीव्र घाव लगे कहकर दुःख नहीं जानता ।
रहा नहीं जानता , मरा नहीं जानता ।
गुहेश्वर लिंग स्वायत होने से। शरीर पलट हुआ था,
Translated by: Banakara K Gowdappa
Translated by: Eswara Sharma M and Govindarao B N
Tamil Translation ஆழமான காயமாகி நொந்ததை அறியேனையனே
இருப்பதையுமறியேன். மடிந்ததையுமறியேன் ஐயனே
உடல் மாறுதலடைந்தது. குஹேசுவரலிங்கமே தானாதலால்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಯ ಪಲ್ಲಟವಾಗು = ಅಂಗ-ಲಿಂಗಗಳು ಪಲ್ಲಟಿಸುವುದು; ಅಂಗ-ಲಿಂಗವಾಗುವುದು, ಲಿಂಗ-ಅಂಗವಾಗುವುದು.; ಪೂರಾಯ ಗಾಯ = ತೀವ್ರವಾದ ಗಾಯ; ಅತ್ಯಂತ ಆಳವಾದ ಗಾಯ; ಬಲವಾದ ಪೆಟ್ಟು; ಸ್ವಾಯತವಾಗು = ತನ್ನದಾಗು, ತನ್ನೊಳಗೆಲ್ಲ ತುಂಬಿಕೊಳ್ಳು; ಲಿಂಗವೇ ತಾನಾಗು;
Written by: Sri Siddeswara Swamiji, Vijayapura