ವಚನ - 326     
 
ನದೀಜಲ, ಕೂಪಜಲ, ತಟಾಕಜಲವೆಂದಂಬು ಹಿರಿದು ಕಿರಿದಾದುದನರಿಯರು. ಬೇರೆ ಮತ್ತೊಂದು ಭಾಷೆ ವ್ರತ ನೇಮಂಗಳ ಹಿಡಿವ ಶೀಲಸಂಬಂಧಿಗಳು ಜಾತ್ಯಂಧರು, ನಿಮ್ಮನೆತ್ತಬಲ್ಲರು ಗುಹೇಶ್ವರಾ.