ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು ಬಲ್ಲರಯ್ಯಾ?
ಅರಿವು ಸಾಮಾನ್ಯವೆ? ಅರಿಯದುದನಾರಿಗೂ ಅರಿಯಬಾರದು,
ಗುಹೇಶ್ವರನೆಂಬ ಲಿಂಗವನರಿಯದಡೆರಡು,
ಅರಿದೊಡೊಂದೇ.
Transliteration Ballanita ballarallade, ariyadudanentu ballarayyā?
Arivu sāmān'yave? Ariyadudanārigū ariyabāradu,
guhēśvaranemba liṅgavanariyadaḍeraḍu,
aridoḍondē.
Hindi Translation इंद्रिय गोचर जान सकते, अगोचर को कैसे जान सकते है?
क्या ज्ञान सामन्य है?
ना जानेवाल कोई किसी को नहीं जानता|
गुहेश्वर नामक लिंग न जाने दो
जाने तो एक है|
Translated by: Banakara K Gowdappa
Translated by: Eswara Sharma M and Govindarao B N
Tamil Translation அறியவியல்வதை அறிவர் அல்லதே
அறியவியலாததை எங்ஙனம் அறிவரோ?
ஞானம் எளிதானதோ?
அறியவியலாததை எவராலுமறியவியலாது.
குஹேசுவரனெனும் இலிங்கத்தை அறியவில்லை
யெனின் இருமை அறிந்தால் ஒன்றுதான்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿಯದುದು = ಸಾಮಾನ್ಯ ಅರಿವಿಗೆ ನಿಲುಕದುದು, ಮನ-ಮಾತುಗಳಿಗೆ ಸಿಕ್ಕದುದು; ಬಲ್ಲನಿತು = ಜ್ಞಾನ ಕರಣಂಗಳ ಅಳವಿಗೆ ನಿಲಿಕಬಲ್ಲ ಅನಿತು, ಇಂದ್ರಿಯಗೋಚರವಾದುದು;
Written by: Sri Siddeswara Swamiji, Vijayapura