•  
  •  
  •  
  •  
Index   ವಚನ - 370    Search  
 
ಇಹಲೋಕ ಪರಲೋಕ ತಾನಿರ್ದಲ್ಲಿ, ಗಗನ ಮೇರುಮಂದಿರ ತಾನಿರ್ದಲ್ಲಿ, ಸಕಲ ಭುವನ ತಾನಿರ್ದಲ್ಲಿ, ಸತ್ಯ ನಿತ್ಯ ನಿರಂಜನ ಶಿವತತ್ತ್ವ ತಾನಿರ್ದಲ್ಲಿ, ಅಂತರ ಮಹದಂತರ ತಾನಿರ್ದಲ್ಲಿ, ಸ್ವತಂತ್ರ ಗುಹೇಶ್ವರಲಿಂಗ ತಾನಿರ್ದಲ್ಲಿ.
Transliteration Ihalōka paralōka tānirdalli, gagana mērumandira tānirdalli, sakala bhuvana tānirdalli, satya nitya niran̄jana śivatattva tānirdalli, antara mahadantara tānirdalli, svatantra guhēśvaraliṅga tānirdalli.
Hindi Translation जहाँ मैं हूँ वहाँ इहलोक परलोक, जहाँ मैं हूँ वहाँ गगन, मेरु, मंदर, जहाँ मैं हूँ वहाँ सकल भुवन; जहाँ मैं हूँ वहाँ सत्य नित्य निरंजन शिव तत्व, जहाँ मैं हूँ वहाँ उत्तरोत्तर चतुर्वलय; जहाँ मैं हूँ वहाँ चंद्रसूर्य तारामंडल, जहाँ मैं हूँ वहाँ अंतर महदंतर, जहाँ मैं हूँ वहाँ स्वतंत्र गुहेश्वरा! Translated by: Banakara K Gowdappa Translated by: Eswara Sharma M and Govindarao B N
Tamil Translation இவ்வுலகு மேலுலகு தன்னிடமே ஆகாயம், மேரு, மந்தரமலை தன்னிடமே எல்லா உலகங்களும் தன்னிடமே நிலைத்த மெய்த் தத்துவம் தன்னிடமே அகன்றவியன் பரப்பு தன்னிடமே சந்திர, சூரிய தாராமண்டலம் தன்னிடமே சூனிய வெட்டவெளி தன்னிடமே குஹேசுவரலிங்கம் பற்றுக் கோடற்றவனன்றோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂತರ ಮಹದಂತರ = ಬಯಲು, ಮಹಾಬಯಲು; ಇಹಲೋಕ = ಭೂಲೋಕ; ಗಗನ = ಆಕಾಶ; ಚತುರ್ವಳಯ = ಕ್ರಮವಾಗಿ ಒಂದರಿಂದ ಒಂದು ವಿಸ್ತಾರವಾದ ನಾಲ್ಕು ವಲಯಗಳು(?); ಪರಲೋಕ = ಸ್ವರ್ಗಲೋಕ; ಮಂದರ = ಮಂದರಪರ್ವತ; ಮೇರು = ಮೇರುಗಿರಿ; ಶಿವತತ್ತ್ವ = ಸೃಷ್ಟಿಮುಖವಾದ, ಸೃಷ್ಟವಾದ ಪ್ರಥಮತತ್ತ್ವ; ಸಕಲ ಭುವನ = ಅಸಂಖ್ಯ ಬ್ರಹ್ಮಾಂಡಗಳು; ಸ್ವತಂತ್ರ = ಯಾವುದರ ಅಂಕಿತಕ್ಕೂ ಒಳಪಡದ ನಿರಾಲಂಬ ಸತ್ಯ; Written by: Sri Siddeswara Swamiji, Vijayapura