Index   ವಚನ - 7    Search  
 
ಅಂಬಿಗನು ಜಗದೊಳಗೆ ಇಂಬಿನಲೋಲಾಡುವನು; ತುಂಬಿದ ಸಾಗರದೊಳಗೆ ನೋಡಯ್ಯ. ನಿಂದ ದೋಣಿಯನೇರಿದಂದಿನ ಹುಟ್ಟ ಕಂಡವರಂದವನರಿದಾತ ತೊಳಸುತ್ತಿದ್ದನು. ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗರ ಚೌಡಯ್ಯ.