Index   ವಚನ - 9    Search  
 
ಅಖಂಡಪರಿಪೂರ್ಣ ನುಡಿಗೆಡೆಯಿಲ್ಲದ, ಎಡೆಗೆ ಕಡೆಯಿಲ್ಲದ, ಏಕೋಭರಿತ ಲಿಂಗವು ತಾನಾಗಿದ್ದ ಬಳಿಕ, ಮತ್ತೆ ಲಿಂಗವು ಹೋಯಿತ್ತು, ಇದ್ದಿತ್ತೆಂದಾಡಿಕೊಂಡ ಸೂತಕದ ಯೋಗಭ್ರಮಿತರ ಮಾತ ಕೇಳಲಾಗದು, ಅ[ದಂ]ತಿರಲಿ, ಅದು ಎಂತಿದ್ದುದಂತೆ. ಅದಕ್ಕೆ ಕ್ರೀಯಿಲ್ಲ, ನಿಃಕ್ರಿಯೆ ಒಡಲು ಆಯಿತ್ತಾಗಿ. ಅದನಂತಿಂತೆಂದು ದೂಷಿಸಿ ನುಡಿವ ಅನಾಚಾರಿಗಳಿಗೆ ಲಿಂಗವೆಲ್ಲಿಯದೊ? ನಿಜವೆಲ್ಲಿಯದೊ? ಅವರು ಲಿಂಗಕ್ಕೆ ದೂರ, ಅವರು ತಮ್ಮ ತಾವರಿಯದೆ ಕೆಟ್ಟರೆಂದಾತನಂಬಿಗರ ಚೌಡಯ್ಯ.