Index   ವಚನ - 21    Search  
 
ಅಯ್ಯಾ ಆಚಾರವುಳ್ಳಕಾಂಚೀಪಟ್ಟಣದಲ್ಲಿ ಒಂದು ಗಂಡುಕತ್ತೆಯು ಸತ್ತುಬಿದ್ದಿರಲು, ಕತ್ತೆಯಂ ಕೈಲಾಸದ ಪಾಲುಮಾಡಬೇಕೆಂದಿದ್ದರಯ್ಯಾ, ಯಾರ್ಯಾರು ಎಂದರೆ: ಶೆಟ್ಟಿಗಾದರಿ, ಪೃಥ್ವಿಶೆಟ್ಟಿ, ಕೋರಿಶೆಟ್ಟಿ, ಬಳೇಶೆಟ್ಟಿ, ನಾಡನಾಲಗೆ, [ಮಿಂಡ]ಗುದ್ದಲಿ, ಬಡವ, ಬೋವಿ ಇಂತಪ್ಪಎಂಟು ಕಟ್ಟೆಯವರು ಕೂಡಿಕೊಂಡು ಆ ಕತ್ತೆಯಂ ಮಂಚದ ಮೇಲೆ ಇಟ್ಟುಕೊಂಡು ಕಮ್ಮೆಣ್ಣೆ, ಕಸ್ತೂರಿ, ಗಂಧ, ಪುನುಗು, ಜವ್ವಾಜಿ, ಬುಕ್ಕಹಿಟ್ಟು, ಊದಿನಕಡ್ಡಿ - ಇಂತಪ್ಪ ಅಷ್ಟಗಂಧದಿಂದ ಮೇಳ ಭಜಂತ್ರಿಯಿಂದ ಒಯ್ದು,ನರಿ ಪಾಲು ಮಾಡಿ ಬಂದರಯ್ಯಾ. ಛೇ, ಛೇ ಎಂದು ಕಣ್ಣಯ್ಯಗಳ ಎಡದ ಪಾದರಕ್ಷೆಯಂ ತೆಗೆದುಕೊಂಡು ಅವರ ಮುದ್ದುಮುಖದ ಮೇಲೆ ಕುಟ್ಟಿದಾತನೆ ನಮ್ಮ ಅಂಬಿಗರ ಚೌಡಯ್ಯನೆಂಬೊ ಶಿವಶರಣನು.