Index   ವಚನ - 26    Search  
 
ಅರಿದೆಹೆನೆಂಬನ್ನಬರ ಅಸಗ ನೀರಡಿಸಿ ಸತ್ತಂತಾಯಿತ್ತು. ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು ಆಪ್ಯಾಯನವಡಸಿ ಸತ್ತಂತಾಯಿತ್ತು. ಅರಿದೆಹೆನೆಂದು ಕೇಳಿಹೇಳಿಹೆನೆಂಬನ್ನಬರ ಆತನು ಶಿಲೆಯ ರೇಖೆಯೆ? ಬಯಲ ಬ್ರಹ್ಮವೆ? ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗರ ಚೌಡಯ್ಯ.