Index   ವಚನ - 32    Search  
 
ಅರ್ಚನೆಯ ಮಾಡುವಲ್ಲಿ ಆವೇಶ ಅರತಿರಬೇಕು. ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು. ಕೊಡುವ ಕೊಂಬಲ್ಲಿ ಸರ್ವಭೂತಹಿತನಾಗಿರಬೇಕು. ಇಂತೀ ಸಡಗರಿಸಿಕೊಂಡಿಪ್ಪಾತನ ಅಡಿಗೆರಗುವೆನೆಂದನಂಬಿಗರ ಚೌಡಯ್ಯ.