Index   ವಚನ - 37    Search  
 
ಆತ್ಮಂಗೆ ದಶವಾಯು ಉಂಟೆಂಬರು. ಊರ್ಧ್ವನಾಳವೈದು, ಅಧೋನಾಳವೊಂದು, ವಾಯುವೊಂದು ಭೇದ, ಆತ್ಮವೊಂದರಲ್ಲಿ ಒಡೆಯದಿದೆ, ಇದೇ ನಿರಂತರ ಸುಖ, ಎಚ್ಚರಿಕೆಯ ಕೂಟ. ಮಿಕ್ಕಾದ ನಾಲ್ಕರಲ್ಲಿ ತಿರುಗಿ ಜೀವರುಗಳ ವಾಯು ನಾಲ್ಕು ಮುಚ್ಚಿ ಅಧೋಮುಖಕ್ಕಿಳಿದಲ್ಲಿ ಕೀಳುಜೀವವೆಂದನಂಬಿಗರ ಚೌಡಯ್ಯ.