Index   ವಚನ - 40    Search  
 
ಆನೆಂಬುದೇನು? ಇದಿರಿಟ್ಟು ತೋರೂದಿದೇನು? ಇದೆಲ್ಲಿಂದಲೊದಗಿತ್ತು? ಇದರ ಲಯವು ತಾನೆಲ್ಲಿ ಎಂದು ಅನುಮಾನಿಸಿ, ಶ್ರೀಗುರುಚರಣವಂ ನಂಬಿ, ಅಂತರ್ಮುಖದಲ್ಲಿ ವಿಚಾರಿಸಿ, ಅಲ್ಲೊಂದು ಮಾರ್ಗವ ಕಂಡು, ಆ ಮಾರ್ಗವ ಬಳಿವಿಡಿದು ತಲೆ ಹೊಲಕ್ಕೆ ಹೋಗಿ ಹಿಂದು ಮುಂದ ಮರೆದು, ಮಹಾಬೆಳಗಿನ ಬೆಳಗಿನಲ್ಲಿ ನಿಂದು, ಪರಮಾನಂದಸಾಗರದೊಳಗೆ ಸಮರಸನಾದವಂಗೆ ಇಹಪರವಿಲ್ಲೆಂದಾತನಂಬಿಗರ ಚೌಡಯ್ಯ.