Index   ವಚನ - 79    Search  
 
ಕಟ್ಟಿ ಕಳೆ ಪಾಪವ, ಬಿಟ್ಟು ಕಳೆ ಪುಣ್ಯವ. ಒತ್ತು ರೋಷವ, ಸಮತೆಯ ಪಸರಿಸಾ. ಎತ್ತಿದರ್ಥವನು ಬೈಚಿಟ್ಟು, ಮನದಲ್ಲಿ ಚಕ್ಕನೆ ತೀವು ಪರಿಣಾಮವನು, ಇದು ಬಟ್ಟೆ, ದೇವತತ್ವದ ಮುಟ್ಟಲುಪದೇಶವ ಕೊಟ್ಟನಂಬಿಗರಚೌಡಯ್ಯ ತನ್ನನೊಲಿವರಿಗೆ.