Index   ವಚನ - 88    Search  
 
ಕಲಿತು ಹೇಳಿಹೆನೆಂಬ ಕರ್ಕಶ ಬೇಡ, ಅರಿಕೆಯಾದೆನೆಂಬ ಅರಿಹಿರಿಯತನ ಬೇಡ, ಅರಿದು ಮರದೆನೆಂಬ ಸಂದೇಹ ಬೇಡ. ದರ್ಪಣದಲ್ಲಿ ತೋರುವ ತನ್ನ ಒ[ಪ್ಪಾ]ದ ಬಿಂಬದಂತೆ, ಅದ ನಿಶ್ಚಯವಾಗಿ ನಿಶ್ಚಯಿಸಿದಲ್ಲಿ ಬೇರೊಂದಿಪ್ಪುದಿಲ್ಲ, ಎಂದನಂಬಿಗರ ಚೌಡಯ್ಯ.