Index   ವಚನ - 122    Search  
 
ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ, ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ, ಸರ್ವಾಪತ್ತಿಗಾಧಾರ ಬಸವಣ್ಣ, (ಸ್ವರ್ಗ) ಮರ್ತ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದಾತನಂಬಿ[ಗ]ರ ಚೌಡಯ್ಯ.