Index   ವಚನ - 140    Search  
 
ತಟ್ಟು ಗೋಣಿಸೊಪ್ಪು ಸಕಲಾತಿ ಅಲ್ಲ[ವಯ್ಯಾ], ತೊತ್ತಿನ ಮಗ ಭಕ್ತನಲ್ಲವಯ್ಯಾ, ಹಿರಿಯ ದೇವತೆಗೆ ಬಿಟ್ಟ ಕೋಣ ಗೂಳಿಯಲ್ಲವಯ್ಯಾ. ಕಂಡ ತೊತ್ತಿಗೆ ಹುಟ್ಟಿದವ ಜಂಗಮವಲ್ಲವಯ್ಯಾ. ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ. ಈ ಮೂ[ಳ]ರಿಗೆ ಆದಿಯಲ್ಲಿ ಗುರುಉಪದೇಶ[ವ] ತುಂಬಿಲ್ಲ. ಈ ಮೂ[ಳ]ರ ಮೂಗು ಕೊಯ್ದು ಉಪ್ಪು ಸಾರು ತುಂಬಿ, ನೆತ್ತಿಯ ಬೋಳಿಸಿ ಕತ್ತೆಯನೇರಿಸಿ, ಮೇಲೆ ನಿಂಬೆಯ ಹುಳಿಯ ಬಿಟ್ಟು, ಪಡುವ ದಾರಿಗೆ ಹೊಡೆಯೆಂದಾತ ನಮ್ಮಅಂಬಿಗರ ಚೌಡಯ್ಯ