Index   ವಚನ - 147    Search  
 
ತಾನು ಮಾಡುವ ಭಕ್ತಿ, ಲಿಂಗದ ಉಪದೇಶವನರಿಯದ ಕಾರಣ ಕಂಡ ಕಂಡ ದೈವಕ್ಕೆ ಹೋಗಿ, ಮಂಡೆ ಮುಂದಲೆಯ ಕೊಟ್ಟನಾದಡೆ ಆತ ಭಕ್ತನಲ್ಲ, ಆತನ ಸಂಗಡ ಹೋಗಿ ಉಪದೇಶವ ಮಾಡಿದಾತನು ಗುರುವಲ್ಲ, ಅಂಥವರ ಮನೆಯಲ್ಲಿ ಹೊಕ್ಕು ಉಂಬಾತ ಜಂಗಮವಲ್ಲ. ಈ ಭಕ್ತ ಜಂಗಮದ ಭೇದವೆಂತೆಂ[ದ]ಡೆ: ಒಡಲ ಕಿಚ್ಚಿಗೆ ಹೋಗಿ ತುಡುಗುಣಿನಾಯಿ ಹೊಕ್ಕು, ತನ್ನ ಒಡಲ ಹೊರೆದಂತಾಯಿತಯ್ಯ [ಎಂದು] ಪೊಡವಿಯೊಳಗೆ ಡಂಗುರವನಿಕ್ಕಿ ಸಾರಿದಾತ ನಮ್ಮ ಅಂಬಿಗರ ಚೌಡಯ್ಯ.