Index   ವಚನ - 169    Search  
 
ನೆನೆವೆನೆ? ಮರೆದವನಲ್ಲ. ನೆನೆಯನೆ? ಉದಾಸೀನಿಯಲ್ಲ. ಕುರುಹೆಂಬೆನೆ? ತೆರಹಿಲ್ಲವಾಗಿ, ಅರಿಯೆನಿನ್ನಾವ ಭಾವಂಗಳೆಂಬವನು. ಎರಡಳಿದು ಒಂದುಳಿದ ಕಾರಣ ನೆನೆಯಲಿಲ್ಲೆಂದನಂಬಿಗರ ಚೌಡಯ್ಯ.