Index   ವಚನ - 172    Search  
 
ಪನ್ನಗಂಗೆ ನನ್ನಿಯ ಗಾರುಡವಲ್ಲದೆ ಮಿಕ್ಕಾದ ದ್ವಯಜಿ[ಹ್ವೆ]ಗಳಿಗುಂಟೆ? ತಿಳಿದ ಸದೈವಂಗೆ ಸದ್ಭಕ್ತಿ ಸದಾಚಾರವಲ್ಲದೆ, ವಿಶ್ವಾಸಘಾತಕಂಗೆ ಅಪ್ರಮಾಣಂಗೆ ಮುಕ್ತಿ ವಿರಕ್ತಿಯಿಲ್ಲ, ಎಂದನಂಬಿಗರ ಚೌಡಯ್ಯ.