ಪೃಥ್ವಿ ಶುದ್ಧವೆಂಬೆನೆ? ಪೃಥ್ವಿ ಶುದ್ಧವಲ್ಲ.
ಜಲ ಶುದ್ಧವೆಂಬೆನೆ? ಜಲ ಶುದ್ಧವಲ್ಲ.
ಅಗ್ನಿ ಶುದ್ಧವೆಂಬೆನೆ? ಅಗ್ನಿ ಶುದ್ಧವಲ್ಲ.
ವಾಯು ಶುದ್ಧವೆಂಬೆನೆ? ವಾಯು ಶುದ್ಧವಲ್ಲ.
ಆಕಾಶ ಶುದ್ಧವೆಂಬೆನೆ? ಆಕಾಶ ಶುದ್ಧವಲ್ಲ. ಗುರುವೆ ನೀ ಕೇಳಯ್ಯ,
ಹುಸಿ ನುಸುಳ ಕಳೆದು ಜ್ಞಾನವೆಂಬ ಬೆಳಗ ಸಾಧಿಸಬಲ್ಲಡೆ
ಇದೊಂದೆ ಶುದ್ಧವೆಂದನಂಬಿಗರ ಚೌಡಯ್ಯ.