Index   ವಚನ - 180    Search  
 
ಪ್ರಸಾದವ ನಂಬಿದಡೆ ಭಿಲ್ಲಮರಾಯನಂತೆ ನಂಬಬೇಕಯ್ಯಾ, ಪ್ರಸಾದವ ನಂಬಿದಡೆ ಬಿಬ್ಬಬಾಚಯ್ಯಗಳಂತೆ ನಂಬಬೇಕಯ್ಯಾ, ಪ್ರಸಾದವ ನಂಬಿದಡೆ ವಾಮನಮುನೀಶ್ವರನ ಶಿಷ್ಯನಂತೆ ನಂಬಬೇಕಯ್ಯಾ, ಪ್ರಸಾದವ ನಂಬಿದಡೆ ಮರುಳುಶಂಕರದೇವರಂತೆ ನಂಬಬೇಕಯ್ಯಾ. ಇಂತು ನಂಬಿ ಕೊಂಡಡೆ ಮಹಾಪ್ರಸಾದ! ನಂಬದೆ ಸಮಯದಾಕ್ಷಿಣ್ಯಕ್ಕೆ ಮನದಳುಕಿನಿಂ ಕೊಂಡಡೆ ಅದು ತನಗೆ ಸಿಂಗಿಯ ಕಾಳಕೂಟವಿಷವೆಂದಾತನಂಬಿಗರ ಚೌಡಯ್ಯ.