Index   ವಚನ - 183    Search  
 
ಬಯಲ ಉದಕವ ಹಿಡಿದು ಮಜ್ಜನಕ್ಕೆರೆವೆನಯ್ಯ. ಸಕಲವನುಳಿದೊಂದು ಪುಷ್ಪದ ಪೂಜೆಯ ಮಾಡುವೆನಯ್ಯ. ಸುಗಂಧ ದುರ್ಗಂಧವ ಕಳೆದು ಧೂಪಾರತಿಯ ಮಾಡುವೆನಯ್ಯಾ. ಪರಬ್ರಹ್ಮವ ಹಿಡಿದು ನಿವಾಳಿಯನೆತ್ತುವೆನಯ್ಯಾ. ಪುಣ್ಯಪಾಪವ ಕಳೆದು ಓಗರವನಿಕ್ಕುವೆನಯ್ಯಾ. ಹದಿನಾಲ್ಕು ಭುವನವನೊಳಗುಮಾಡಿ ಹೊರಗೆ ನಿಂದು ಸದಾಶಿವನ ಪೂಜಿಸಿದಾತನಂಬಿಗರ ಚೌಡಯ್ಯ.