Index   ವಚನ - 185    Search  
 
ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ? ಕ್ರೀಗೆ ಅರಿವಿಲ್ಲದೆ ಅರಿವಿಗೆ ಅರಿವುಂಟೆ? ಮೊಳೆ ಮೊಳೆತು ಪುನರಪಿ ಬೀಜವಾದಂತೆ, ಅರಿವು ಕ್ರೀಯಲ್ಲಿ ನಿಂದು ಉಭಯವು ತಾನಾದ ತೆರದಂತೆ, ಆ ಎರಡರಲ್ಲಿ ಕೂಡಿದ ಉಳುಮೆಯನರಿಯಬೇಕೆಂದನಂಬಿಗರ ಚೌಡಯ್ಯ.