•  
  •  
  •  
  •  
Index   ವಚನ - 392    Search  
 
ಪೃಥ್ವಿಯಲೊದಗಿದ ಘಟವು ಪೃಥ್ವಿಯಲಡಗಿದಡೆ ಆ ಪೃಥ್ವಿಯ ಚರಿತ್ರವೆ ಚರಿತ್ರ ನೋಡಾ! ಅಪ್ಪುವಿನಲೊದಗಿದ ಘಟವು ಅಪ್ಪುವಿನಲಡಗಿದಡೆ ಆ ಅಪ್ಪುವಿನ ಚರಿತ್ರವೆ ಚರಿತ್ರ ನೋಡಾ! ತೇಜದಲೊದಗಿದ ಘಟವು ತೇಜದಲಡಗಿದಡೆ ಆ ತೇಜದ ಚರಿತ್ರವೆ ಚರಿತ್ರ ನೋಡಾ! ವಾಯುವಿನಲೊದಗಿದ ಘಟವು ವಾಯುವಿನಲಡಗಿದಡೆ ಆ ವಾಯುವಿನ ಚರಿತ್ರವೆ ಚರಿತ್ರ ನೋಡಾ! ಆಕಾಶದಲೊದಗಿದ ಘಟವು ಆಕಾಶದಲಡಗಿದಡೆ ಆ ಆಕಾಶದ ಚರಿತ್ರವೆ ಚರಿತ್ರ ನೋಡಾ! ಗುಹೇಶ್ವರನೆಂಬ ಲಿಂಗದಲೊದಗಿದ ಘಟವು ಲಿಂಗದಲಡಗಿದಡೆ, ಆ ಲಿಂಗದ ಚರಿತ್ರವೆ ಚರಿತ್ರ ನೋಡಾ.
Transliteration Pr̥thviyalodagida ghaṭavu pr̥thviyalaḍagidaḍe ā pr̥thviya caritrave caritra nōḍā! Appuvinalodagida ghaṭavu appuvinalaḍagidaḍe ā appuvina caritrave caritra nōḍā! Tējadalodagida ghaṭavu tējadalaḍagidaḍe ā tējada caritrave caritra nōḍā! Vāyuvinalodagida ghaṭavu vāyuvinalaḍagidaḍe ā vāyuvina caritrave caritra nōḍā! Ākāśadalodagida ghaṭavu ākāśadalaḍagidaḍe ā ākāśada caritrave caritra nōḍā! Guhēśvaranemba liṅgadalodagida ghaṭavu liṅgadalaḍagidaḍe, ā liṅgada caritrave caritra nōḍā.
Hindi Translation पृथ्वि से आया घट पृथ्वि में छिपा हो तो उस पृथ्वि का चरित्र ही चरित्र है! जलसे आया घट जल में छिपा हो तो उस जल का चरित्र ही चरित्र है! अग्नि से आया घट अग्नि में छिपा हो तो उस अग्नि का चरित्र ही चरीत्र है! वायु से आया घट वायु में छिपा हो तो उस वायु का चरित्र ही चरित्र है। आकाश से आया घट आकाश में छिपा हो तो उस आकाश का चरित्र ही चरित्र है! गुहेश्वर नामक लिंग में आया घट लिंग में छिपा हो तो उस लिंग का चरित्र ही चरित्र देखो। Translated by: Banakara K Gowdappa Translated by: Eswara Sharma M and Govindarao B N
Tamil Translation பூமியில் தோன்றிய பொருட்கள் பூமியிலடங்க அந்த பூமியின் பெருமையே பெருமை காணாய்! நீரில் தோன்றிய பொருட்கள் நீரிலடங்க அந்த நீரின் பெருமையே பெருமை காணாய்! தீயில் தோன்றிய பொருட்கள் தீயிலடங்க அந்தத் தீயின் பெருமையே பெருமை காணாய்! வாயுவில் தோன்றிய பொருட்கள் வாயுவிலடங்க அந்த வாயுபின் பெருமையே பெருமை காணாய்! ஆகாயத்தில் தோன்றிய பொருட்களாகாயத்திலடங்க அந்த ஆகாயத்தின் பெருமையே பெருமை காணாய்! குஹேசுவரனெனும் இலிங்கத்தில் தோன்றிய பொருட்கள் அந்த இலிங்கத்திலேயே அடங்கின் அந்த இலிங்கத்தின் பெருமையே பெருமை காணாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಡಗಿದಡೆ = ಆ ಪೃಥ್ವಿಯಲ್ಲಿಯೇ ಅಡಗಿದರೆ; ಅಡಗಿದಡೆ = ಲೀಯವಾಗುತ್ತದೆ; ಒದಗಿದ = ಉಂಟಾದ; ಒದಗಿದ = ಕಾಣಬಂದ; ಘಟವು = ಪದಾರ್ಥವು; ಘಟವು = ಜೀವಾತ್ಮನು(ಹಾಗೂ ಸಕಲ ವಿಶ್ವವು); ಚರಿತ್ರವೆ ಚರಿತ್ರ = ಅದು ಪೃಥ್ವಿಯ ಮಹಿಮೆಯೇ ಮಹಿಮೆ; ಪೃಥ್ವಿಯಲಿ = ಭೂತತ್ವ್ತದಲಿ; ಲಿಂಗದಲಿ = ಮಹಾಲಿಂಗದಲ್ಲಿ; ಲಿಂಗದಲಿ = ಅದೇ ಲಿಂಗದಲ್ಲಿ; ಹಾಗಾದಲ್ಲಿ-ಆ ಲಿಂಗದ = ಅದು ಆ ಮಹಾಲಿಂಗದ ಮಹಿಮೆ; Written by: Sri Siddeswara Swamiji, Vijayapura