Index   ವಚನ - 222    Search  
 
ಮೃಡನನೊಲಿಸಿ[ಹೆ]ನೆಂದು ನುಡಿವ ನಾಲಗೆಯೆಡಹಿತೆಯಲ್ಲಿ ಕಲ್ಲು ಕೊರಡೆ? ಒಡಲಿಂಗೆ ಹೆಣ್ಣು ಹೊನ್ನು ಮಣ್ಣು ಅಡ್ಡಬಿದ್ದು ಕೊಲುವಾಗ, ನಡೆವ ಗಂಡರುಂಟೇ ಶಿವಪಥಕ್ಕೆ? ತನ್ನೊಡಲೊಳಗಣನ್ನವು ಮರಳಿದೆಡೆಗೆ ಹೇಸುವಂತೆ ಹೇಸಿ ಬಿಟ್ಟಡೆ, ನಡೆದು ಶಿವನ ಕೂಡು[ವ]ನೆಂದಾತನಂಬಿಗರಚೌಡಯ್ಯ.