Index   ವಚನ - 239    Search  
 
ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ? ಶಾಸ್ತ್ರದಲುಳ್ಳಡೆ ಸಮಯವಾದವಪ್ಪುದೆ? ಪರ್ವತದಲುಳ್ಳಡೆ ಹೋದವರು ಬಹರೆ? ನಿರ್ಬುದ್ಧಿ ಮಾನವರನೇನೆಂಬೆ! ಮನ, ವಚನ, ಕಾಯಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ ಕಂಡೆನೆಂದನಂಬಿಗರ ಚೌಡಯ್ಯ.