ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು,
ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ವಸ್ಥಿರವಾಯಿತ್ತು.
ಸಹಜದುದಯದ ನಿಲವಿಂಗೆ,
ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ
ಗುಹೇಶ್ವರಾ ನಿಮ್ಮ ಶರಣನನುಪಸುಖಿಯಾಗಿದ್ದನು.
Transliteration Ahaṅkāravane maredu, dēhaguṇaṅgaḷane jaredu,
iha paravu tānendarida kāraṇa, sōhaṁ bhāva svasthiravāyittu.
Sahajadudayada nilaviṅge,
mahāghanaliṅgada beḷagu svāyatavāda kāraṇa
guhēśvarā nim'ma śaraṇananupasukhiyāgiddanu.
Hindi Translation अहंकार प्रदर्शन करके, देहगुणों को निंदा करके,
खुद् इह-पर का कारण समझकर
सोऽहं भाव सुस्थिर हुआ था।
सहज उदय की स्थिति से
महाघनलिंग प्रकाश स्वायत होने से
गुहेश्वरा, तुम्हारा शरण उपमातीत है।
Translated by: Eswara Sharma M and Govindarao B N
Tamil Translation செருக்கை மறந்து, உடலியல்புகளை மறந்து
இகபரத்தில் நிறைந்த கடவுள் தானென அறிந்ததால்
“அவனே நான்” எனும் உணர்வு உறுதியொடு நிலைத்தது
இயல்பாக எழுந்த சொரூபத்தின் நிலையான
மேன்மைசால் இலிங்கவொளிதன்னுளே இணைந்ததால்
குஹேசுவரனே, உம் சரணன் ஒப்பற்றவனன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಹಂಕಾರ = ಅಜ್ಞಾನಜನ್ಯವಾದ ನಾನು ಎಂಬ ಭಾವ; ಇಹಪರವು = ಇಹ-ಪರವನ್ನೆಲ್ಲ ವ್ಯಾಪಿಸಿದ ಪರವಸ್ತು; ತಾನೆಂದು ಅರಿ = ಆ ಪರವಸ್ತುವೆ ತಾನು ಎಂದು ಸಾಧನೆಯ ಮೂಲಕ ತಿಳಿದುಕೊ; ದೇಹಗುಣಂಗಳು = ದೇಹಕ್ಕೆ ಸಂಬಂಧಿಸಿದ ಗುಣ, ಕ್ರಿಯೆ ಮತ್ತು ಅವಸ್ಥೆಗಳು; ಮಹಾಘನಲಿಂಗದ ಬೆಳಗು = ಜ್ಞಾನತೇಜೋಘನವಾದ ಮಹಾಲಿಂಗದ ಕಳೆ; ಸಹಜದುದಯದ ನಿಲುವು = ಸೋಹಂ ಸಾಧನೆಯಿಂದ ತನ್ನೊಳಗೆ ಸಹಜವಾಗಿ ಉದಿಸಿದ ಸ್ವರೂಪಜ್ಞಾನದ ನಿಲುವು; ಸೋsಹಂಭಾವ = ಆ ಪರಮಾತ್ಮನೆ ನಾನು-ಎಂಬ ಭಾವ; ಸ್ವಸ್ಥಿರವಾಗು = ಅಂಗವಿಸು, ತನ್ನಲ್ಲಿ ಗಟ್ಟಿಗೊಳ್ಳು, ಪಕ್ವವಾಗು; ಸ್ವಾಯತವಾಗು = ತನ್ನೊಳಗೆ ಬೆರತುಹೋಗು;
Written by: Sri Siddeswara Swamiji, Vijayapura