ಮುಂಡಧಾರಿಯ ತಲೆ ಮುಂದೆ ಬರ್ಪುದ ಕಂಡೆ.
ಜಟಾಧಾರಿಯ ತಲೆ ನಡೆದು ಹೋಯಿತ್ತ ಕಂಡೆ.
ಖಂಡಕಪಾಲಿಯ ತಲೆಯ ಖಂಡವ ಕೊಯಿತ್ತ ಕಂಡೆ.
ಬಾಲಬ್ರಹ್ಮಚಾರಿಯ ಬಾರನೆತ್ತಿತ್ತ ಕಂಡೆ.
ಭಕ್ತರೆಲ್ಲರೂ ಸತ್ತು ನೆಲಕ್ಕಿಕ್ಕಿತ್ತ ಕಂಡೆ.
ಗುಹೇಶ್ವರಾ ನೀ ಸತ್ತು ಲಿಂಗವಾಯಿತ್ತ ಕಂಡೆ.
Transliteration Muṇḍadhāriya tale munde barpuda kaṇḍe.
Jaṭādhāriya tale naḍedu hōyitta kaṇḍe.
Khaṇḍakapāliya taleya khaṇḍava koyitta kaṇḍe.
Bālabrahmacāriya bāranettitta kaṇḍe.
Bhaktarellarū sattu nelakkikkitta kaṇḍe.
Guhēśvarā nī sattu liṅgavāyitta kaṇḍe.
Hindi Translation मुंडधारी का सिर आगे आते देखा।
जटाधारी का सिर चलते देखा।
खंड कपाली भेदभाव दूर करते देखा।
बाल ब्रह्मचारी माया आवरण दूर करते देखा।
सब भक्त भाव मरकर दूर होते देखा।
गुहेश्वरा, तुम मरकर लिंग बना देखा।
Translated by: Eswara Sharma M and Govindarao B N
Tamil Translation கபால மாலையையணிந்த தலை முன்னால் சென்றதைக் கண்டேன்
ஜடாதாரியின் தலை நடந்து சென்றதைக் கண்டேன்
பிரம்மகபாலம் தரித்தவனின் பேதஞானம் அகன்றதைக் கண்டேன்
தூய்மையான சிவனின் தலைவாயில் திறந்ததைக் கண்டேன்
பக்தர்களனைவரும் மடிந்து அடங்கியதைக் கண்டேன்
குஹேசுவரனே “நீங்கள் வேறு” எனும் உணர்வு அகன்று
இலிங்கமானதைக் கண்டேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಂಡೆ = ನೋಡಿದೆನು; ಕಂಡೆ = ನೋಡಿದೆ; ಕೊಯಿತ್ತ ಕಂಡೆ = ಅಳಿಸಿಹಾಕಿದುದ ನೋಡಿದೆ; ಖಂಡಕಪಾಲಿಯ = ಉಗುರಿನಿಂದ ಕತ್ತರಿಸಲಾದ ಬ್ರಹ್ಮಕಪಾಲವನು ಧರಿಸಿದವನ, ಶಿವನ; ಖಂಡವ = ಖಂಡಿತಜ್ಞಾನವನು; ಶಿವನು ಬೇರೆ, ನಾನು ಬೇರೆ ಎಂಬ ಭೇದ ಜ್ಞಾನವನು; ಜಟಾಧಾರಿಯ = ಜಟಾಧಾರಿಯಾದ ಶಿವನ; ತಲೆ = ಆ ಶಿವನ ಜ್ಞಾನ, ಆ ಜ್ಞಾನವುಳ್ಳ ಭಕ್ತ; ತಲೆ = ಜ್ಞಾನವುಳ್ಳ ಭಕ್ತ; ನಡೆದು ಹೋಯಿತ್ತ ಕಂಡೆ = ಶಿವಪಥದಲ್ಲಿ ಹಂತಹಂತವಾಗಿ ನಡೆದುಹೋದುದನು ಕಂಡೆ; ನೀವು = "ನನಗೆ ಭಿನ್ನವಾಗಿ ನೀವು" ಎಂಬ ಭಾವ; ಬಾರನು ಎತ್ತಿತ್ತ ಕಂಡ = ಮಹಾದ್ವಾರವು ತೆರೆದುದನ್ನು ನೋಡಿದೆ, ನಾನು ಎಂಬ ಮಾಯಾಪರದೆಯೆಲ್ಲ ಹರಿದು ಸರ್ವಮಯನಾದ ಶಿವನ ದರ್ಶನವಾದುದ ಕಂಡೆ; ಬಾಲಬ್ರಹ್ಮಚಾರಿಯ = ಸದಾ ಶುದ್ದನಾದ ಶಿವನ; ಭಕ್ತರೆಲ್ಲರೂ = ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ ಮತ್ತು ಶರಣ ಎಂಬ ಭಕ್ತರು; ನಾನು ಭಕ್ತ ನಾನು ಮಾಹೇಶ್ವರ ಮುಂತಾದ ಭಾವಗಳು; ಮುಂಡಧಾರಿ = ಮುಂಡಗಳನ್ನು ಮಾಲೆಯಾಗಿ ಧರಿಸಿರುವ ಶಿವ; ಮುಂದೆ ಬಪ್ಪುದ = ಶಿವಪಥದಲ್ಲಿ ಮುನ್ನಡೆವುದ; ಲಿಂಗವಾಯಿತ್ತ ಕಂಡೆ = ಎಲ್ಲವೂ ನಿಷ್ಕಲಲಿಂಗವಾಗಿ ಉಳಿದುದ ಕಂಡೆ; ಸತ್ತು = ಮೆರಯಾಗಿ; ಸತ್ತು ನೆಲಕಿಕ್ಕಿತ್ತ = ಅಡಗಿಹೋದುದನು;
Written by: Sri Siddeswara Swamiji, Vijayapura