•  
  •  
  •  
  •  
Index   ವಚನ - 428    Search  
 
ಭಕ್ತಂಗೆ ಉತ್ಪತ್ಯವಿಲ್ಲಾಗಿ, ಸ್ಥಿತಿಯಿಲ್ಲ. ಸ್ಥಿತಿಯಿಲ್ಲಾಗಿ ಲಯವಿಲ್ಲ. ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ, ನಿತ್ಯನಾಗಿರ್ಪ ಗುಹೇಶ್ವರಾ ನಿಮ್ಮ ಶರಣ.
Transliteration Bhaktaṅge utpatyavillāgi, sthitiyilla. Sthitiyillāgi layavilla. Munna ellinda bandanallige hōgi, nityanāgirpa guhēśvarā nim'ma śaraṇa.
Hindi Translation भक्त को उत्पत्ती न होने से स्थिति नहीं। स्थिति न होने से लय नहीं। पहले जहाँ से आया वहीं जाकर नित्य बना। गुहेश्वरा, तुम्हरा शरण। Translated by: Eswara Sharma M and Govindarao B N
Tamil Translation பக்தனுக்குப் பிறவியில்லை எனவே இருப்பில்லை இருப்பில்லை எனவே இலயமுமில்லை முன்பு எங்கிருந்து வந்தனனோ அங்கேயே சென்று குஹேசுவரனே, உம் சரணன் அழிவின்றி இருப்பான். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಲ್ಲಿಗೆ ಹೋಗಿ = ಆ ಮೂಲವಸ್ತುವಿನಲ್ಲಿಗೆ, ಆ ಸರ್ವಾಧಾರ ಪರಮಾತ್ಮನಲ್ಲಿಗೆ ಹೋಗಿ; ಉತ್ಪತ್ತಿಯಿಲ್ಲಾಗಿ = ದೇಹಸಂಬಂಧಿತ ಉತ್ಪತ್ತಿಯು ಇಲ್ಲವಾದುದರಿಂದ; ಎಲ್ಲಿಂದ ಬಂದನು = ಯಾವ ಮೂಲವಸ್ತುವಿನಿಂದ ಕೆಳಗಿಳಿದು ದೇಹವನು ಸೇರಿದನೋ; ನಿತ್ಯನಾಗಿ ಇಪ್ಪ = (ಶರಣನು) ನಿತ್ಯನಾಗಿ ಇರುವ, ಅಭವನಾಗಿ ವಾಸಿಸುವ; ಭಕ್ತಂಗೆ = ದೇಹಾತ್ಮಭಾವ ತ್ಯಜಿಸಿ, ಪರಮಾತ್ಮನೇ ತಾನು ಎಂದು ಅಪರೋಕ್ಷತಹ ಅರಿತ ಶರಣನಿಗೆ; ಮುನ್ನ = ಮೊದಲು, ದೇಹಾದಿ ಸಕಲ ಪ್ರಪಂಚ ತೋರುವ ಮುಂಚೆ; ಲಯವಿಲ್ಲ = ನಾಶವಿಲ್ಲ; ಸ್ಥಿತಿಯಿಲ್ಲ = ಕಾಲಮಿತವಾದ ಬದುಕು ಇಲ್ಲ; ಸ್ಥಿತಿಯಿಲ್ಲಾಗಿ = ಕಾಲ ಸೀಮಿತವಾದ ಬಾಳು ಇಲ್ಲವಾದುದರಿಂದ; Written by: Sri Siddeswara Swamiji, Vijayapura