•  
  •  
  •  
  •  
Index   ವಚನ - 430    Search  
 
ರಂಗ ಒಂದೇ, ಕಂಭ ಒಂದೇ, ದೇವರೊಂದೇ, ದೇಗುಲ ಒಂದೇ. ಗುಹೇಶ್ವರಾ ನಿಮ್ಮಾಣೆ ನಿಮ್ಮ ಮನ್ನಣೆಯ ಶರಣರ ದೇವರೆಂದೆಂಬೆ.
Transliteration Raṅga ondē, kambha ondē, dēvarondē, dēgula ondē. Guhēśvarā nim'māṇe nim'ma mannaṇeya śaraṇara dēvarendembe.
Hindi Translation रंग एक ही हैं, कंभ एक ही है , देव एक ही हैं, मंदिर एक ही है गुहेश्वरा तुम्हारे प्यारे शरण को देव कहूँगा। Translated by: Banakara K Gowdappa Translated by: Eswara Sharma M and Govindarao B N
Tamil Translation அரங்கமொன்றே கம்பமொன்றே, இறைவனொன்றே கோயிலொன்றே, குஹேசுவரனே, நீர் விரும்பும் சரணர்களை இறைவன் என்பேன். Translated by: Smt. Kalyani Venkataraman, Chennai
ಶಬ್ದಾರ್ಥಗಳು ಒಂದೇ = ಅವೆಲ್ಲ ಒಂದೇ ವಸ್ವುವಿನಿಂದಾದುದರಿಂದ ಒಂದೇ; ಕಂಭ = ಆ ಮಂಟಪಕ್ಕೆ ಆಧಾರವಾಗಿ ನಿಂತಿರುವ ಸ್ತಂಭಗಳು; ದೇಗುಲ = ಗುಡಿ, ಗರ್ಭಗುಡಿ; ದೇವರು = ಆ ಗರ್ಭಗುಡಿಯೊಳಗಿರುವ ದೇವಮೂರ್ತಿ; ದೇವರೆಂಬೆ = ನೀವೇ, ದೇವರೇ ಎಂದು ತಿಳಿಯುತ್ತೇನೆ; ನಿಮ್ಮ ಮನ್ನಣೆಯ = ನಿಮಗೆ ಒಪ್ಪತರಾದ, ನಿಮಗೆ ಸಮರ್ಪಿತರಾದ; ರಂಗ = ದೇವಾಲಯದ ಮಧ್ಯಭಾಗದಲ್ಲಿರುವ ರಂಗಮಂಟಪ; ಶರಣರ = ಶರಣರನ್ನು; Written by: Sri Siddeswara Swamiji, Vijayapura