ಅಳಿಮೇಳ ಚರ್ಚಗೊಟ್ಟಿ ಚೌವಟತನಕಾಗಿ ವ್ರತದಾಳಿಯ ಮಾಡಿಕೊಳ್ಳದೆ
ತನುವಿಗೆ ಕಟ್ಟು, ಮನಕ್ಕೆ ವ್ರತ,
ಸರ್ವೇಂದ್ರಿಯ ವಿಸರ್ಜನವಾಗಿ ಮಾಡಿಕೊಂಬುದೆ ಸ್ವಯವ್ರತ.
ಈ ಗುಣ ಏಲೇಶ್ವರಲಿಂಗಕ್ಕೆ ವ್ರತದ ಸುಪಥದ ಪಥ.
Art
Manuscript
Music
Courtesy:
Transliteration
Aḷimēḷa carcagoṭṭi cauvaṭatanakāgi vratadāḷiya māḍikoḷḷade
tanuvige kaṭṭu, manakke vrata,
sarvēndriya visarjanavāgi māḍikombude svayavrata.
Ī guṇa ēlēśvaraliṅgakke vratada supathada patha.