Index   ವಚನ - 35    Search  
 
ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ ಸೋಂಕು ಬಹುದಕ್ಕೆ ಮುನ್ನವೆ ಸುಳುಹನರಿದು, ತಟ್ಟುಮುಟ್ಟು ಬಹುದಕ್ಕೆ ಮುನ್ನವೆ ಕಟ್ಟಣೆಯ ಮಾಡಿ, ಮೀರಿ ದೃಷ್ಟದಿಂದ ಶಿವಾಧಿಕ್ಯ ತಪ್ಪಿ ಬಂದಲ್ಲಿ ತನ್ನ ಕಟ್ಟಳೆಯ ವ್ರತಸ್ಥಭಕ್ತರು ಗಣಂಗಳು ಗುರುಲಿಂಗಜಂಗಮ ಮುಂತಾಗಿ ಎನ್ನ ವ್ರತದ ದೃಷ್ಟದ ಕಟ್ಟಳೆ ತಪ್ಪಿತ್ತೆಂದು ಮಹಾಪ್ರಮಥರಲ್ಲಿ ತಪ್ಪನೊಪ್ಪಿಸಿ, ಇನ್ನು ಘಟವಿಪ್ಪುದಿಲ್ಲಾಯೆಂದು ಬೀಳ್ಕೊಂಡು ಸತ್ಯಕ್ಕೊಪ್ಪಿದಂತೆ ತನ್ನ ಚಿತ್ತವಿದ್ದು ಪರಿಹರಿಸಿಕೊಂಬುದು ಮರ್ತ್ಯದ ಅನುಸರಣೆ. ತಪ್ಪಿದಲ್ಲಿಯೆ ಆತ್ಮವಸ್ತುವಿನಲ್ಲಿ ಕೂಡುವುದು ಕಟ್ಟಾಚಾರಿಯ ನೇಮ. ಇಂತೀ ಉಭಯವ ವಿಚಾರಿಸಿ ನಿಂದ ವ್ರತಕ್ಕೆ ನಿಮ್ಮ ಮನವೆ ಸಾಕ್ಷಿ. ಆಜ್ಞೆಯ ಮೀರಲಿಲ್ಲ, ಬಂಧನದಲ್ಲಿ ಅಳಿಯಲಿಲ್ಲ. ನೀವು ನೀವು ಬಂದ ಬಟ್ಟೆಯ ನೀವೆ ನೋಡಿಕೊಳ್ಳಿ. ಎನ್ನ ಬಟ್ಟೆ, ಏಲೇಶ್ವರಲಿಂಗದ ಗೊತ್ತು, ಕೆಟ್ಟಿಹಿತೆಂದು ಸೂಚನೆದೋರಿತ್ತು.