Index   ವಚನ - 44    Search  
 
ಬಸವೇಶ್ವರಂಗೆ ಸರ್ವಗುಣ ಶೀಲ, ಚೆನ್ನಬಸವಣ್ಣಂಗೆ ದಿವ್ಯಜ್ಞಾನಗುಣ ಶೀಲ, ಪ್ರಭುದೇವರಿಗೆ ಬಸವಣ್ಣ ಚೆನ್ನಬಸವಣ್ಣನ ಉಭಯಗುಣ ಶೀಲ, ಮಡಿವಾಳಯ್ಯಂಗೆ ವೀರಗುಣ ಶೀಲ, ಅಜಗಣ್ಣಂಗೆ ಐಕ್ಯಗುಣ ಶೀಲ, ಸಿದ್ಧರಾಮಯ್ಯಂಗೆ ಯೋಗಗುಣ ಶೀಲ, ನಿಜಗುಣಂಗೆ ಆತ್ಮಗುಣ ಶೀಲ, ಚಂದಯ್ಯಂಗೆ ವೈರಾಗ್ಯಗುಣ ಶೀಲ, ಘಟ್ಟಿವಾಳಂಗೆ ತ್ರಿವಿಧಗುಣ ಶೀಲ, ಮೋಳಿಗಯ್ಯಂಗೆ ಭೇದಗುಣ ಶೀಲ, ಅಕ್ಕಗಳಿಗೆ ನಿರ್ವಾಣಗುಣ ಶೀಲ, ಮಿಕ್ಕಾದ ಪ್ರಮಥರಿಗೆಲ್ಲಕ್ಕೂ ಸ್ವತಂತ್ರಗುಣ ಶೀಲ. ಎನಗೆ ಏಲೇಶ್ವರಲಿಂಗವು ಕೊಟ್ಟುದೊಂದೆ ವಿಶ್ವಾಸಗುಣ ಶೀಲ.