Index   ವಚನ - 68    Search  
 
ಸದ್ಭಾವವ್ರತಿ, ವೀರವ್ರತಿ, ಧೀರವ್ರತಿ, ದೃಷ್ಟವ್ರತಿ, ನಿಷ್ಠೆಯವ್ರತಿ, ಸರ್ವಜ್ಞಾನವ್ರತಿ, ಸಂತೋಷವ್ರತಿ, ಸಂಬಂಧವ್ರತಿ, ಸಂಪದವ್ರತಿ, ಸರ್ವಾಂಗವ್ರತಿ, ಪರಿಪೂರ್ಣವ್ರತಿ, ಸರ್ವಜೀವದಯಾವ್ರತಿ, ಸಕಲವ್ರತಿ, ನಿಃಕಲವ್ರತಿ, ಪರವ್ರತಿ, ಪರಬ್ರಹ್ಮವ್ರತಿ, ಪರತತ್ತ್ವವ್ರತಿ, ಪರವಸ್ತುವ್ರತಿ, ಪಿಂಡವ್ರತಿ, ಪಿಂಡಜ್ಞಾನವ್ರತಿ, ಸ್ಥೂಲವ್ರತಿ, ಸೂಕ್ಷ್ಮವ್ರತಿ, ಕಾರಣವ್ರತಿ, ಅಂಗವ್ರತಿ, ಲಿಂಗವ್ರತಿ, ಧನವ್ರತಿ, ಧಾನ್ಯವ್ರತಿ, ದೃಕ್ಕಿಂಗೊಳಗಾದ, ತನ್ನ ಕ್ರೀಗನುಕೂಲವಾದ ಸಂಬಂಧವ್ರತಂಗಳ ಆರೋಪಿಸಿ ನಿಂದಲ್ಲಿ ನಾನಾ ಸಮೂಹದ ಸತ್ಕ್ರೀಗಳನರಿತು, ರೋಚಕ ಅರೋಚಕ ಮಾರ್ಗ ಅಮಾರ್ಗದ ಉಭಯದ ತತ್ತನರಿದು ಕ್ರೀಯ ಆದಿಯನರಿದು, ನಿಃಕ್ರೀಯ ನಿಜವ ಭೇದಿಸಿ ಕಂಡು ಸರ್ವದಯಾಸಂಪನ್ನನಾಗಿ ಸರ್ವಾಂಗಲಿಂಗಿಯಾಗಿ ಸಕಲವ್ರತಮಹಾರಾಜ್ಯಸ್ಥನಾಗಿ ನಿಂದ ಏಲೇಶ್ವರಲಿಂಗಕ್ಕೆ ನಾನಿಳಿದ ಬಂಟ. ವ್ರತವನರಿದು ಮರೆದವರ ಸ್ವಪ್ನದಲ್ಲಿ ಕಂಡಡೆ ಅವರಿಗಿಕ್ಕಿದ ತೊಡರು ಎಲೆದೊಟ್ಟ ನುಂಗಿದೆನು.