Index   ವಚನ - 71    Search  
 
ಸರ್ವಸಮಯಾಚಾರ, ಸಕಲಭೋಗಸಮಯಾಚಾರ, ಇಂತೀ ಭೇದಂಗಳಲ್ಲಿ ಕೊಡುವ-ಕೊಂಬುದ-ಒಡಗೂಡುವುದ, ಒಡೆಯಂಗೆ ಕೊಟ್ಟು, ಅವರ ಅಡಿವಿಡಿದು ಒಡೆಯನ ನಿರೂಪದಿಂದ ತನ್ನ ಅಡಿಯೆಡೆ ಕೊಡುವ-ಕೊಂಬುವ ಸುಖಭೋಗಂಗಳು ಮುಂತಾಗಿ ಇವ ಒಡೆಯಂಗಿತ್ತು ತಾ ಕೊಂಬುದು, ಒಡೆಯರ ಕಟ್ಟಳೆ. ಹೀಗಲ್ಲದೆ ಹಾಸ ತೆಗೆದ ತುಡುಗುಣಿಯಂತೆ ಕಡಿವಂಗೆ ಮತ್ತೆ ಒಡೆಯರ ಕಟ್ಟಳೆಯಿಲ್ಲ, ಏಲೇಶ್ವರಲಿಂಗಕ್ಕೆ ದೂರವೆಂಬೆ.