•  
  •  
  •  
  •  
Index   ವಚನ - 449    Search  
 
ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು, ಬಾಯಿಲ್ಲದ ರುಚಿ, ಭಾವವೆ ಕರ್ಪರವಾಗಿ `ಪರಮ ದೇಹಿ' ಎಂದು ಬೇಡುವ ಪರಮನ ತೋರಯ್ಯಾ ಗುಹೇಶ್ವರಾ.
Transliteration Kālillada gamana, kaiyillada sōṅku, bāyillada ruci, bhāvave karparavāgi `parama dēhi' endu bēḍuva paramana tōrayyā guhēśvarā.
English Translation 2 Show me, O Guheśvara, The Supreme Lord, Whose gait is without feet, Whose touch is without hands, Whose taste is without tongue, Who begs, with a bowl of Love, For the Supreme!
Hindi Translation बिना पैर गमन, बिना हाथ स्पर्श, बिना मुँह रुचि, भाव ही कपाल, परम देही कहकर माँगनेवाले शराण को दिखाओ गुहेश्वरा। Translated by: Eswara Sharma M and Govindarao B N
Tamil Translation காலற்ற நடை, கையின்றி ஏற்றல் நாக்கற்ற சுவை உணர்வே கப்பரையாகி, இறைவனே என்று வேண்டும் பரமனைக் காட்டுவாய் ஐயனே, குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಎಂದು ಬೇಡುವ = ಎಂದು ಬೇಡುತ್ತಾನೆ; ಕಾಲಿಲ್ಲದ ಗಮನ = ಶರಣನು-ಕಾಲಿಲ್ಲದೆ ನಡೆಯುತ್ತಾನೆ; ಕೈಯಿಲ್ಲದ ಸೋಂಕು = ಕೈಯಿಲ್ಲದೆ ಹಿಡಿಯುತ್ತಾನೆ; ತೋರಯ್ಯಾ = ತೋರಿಸು; ಪರಮದೇಹಿ = ಪರಮಾತ್ಮನೇ ಭಿಕ್ಷೆಯನು ನೀಡು; ಪರಮನ = ಅಂಥ ಶರಣನನ್ನು; ಬಾಯಿಲ್ಲದ ರುಚಿ = ನಾಲಗೆಯಿಲ್ಲದೆ ರುಚಿಸುತ್ತಾನೆ; ಭವವೆ ಕಪ್ಪರ = ಸದ್ಭಾವನೆವೆಂಬುದು ಭಿಕ್ಷಾಪಾತ್ರೆ; Written by: Sri Siddeswara Swamiji, Vijayapura