ಇಂಬಿನ ಚುಂಬನ ಅಮೃತಾಹಾರ, ಆಲಿಂಗನವೆ ಆಭರಣ,
ಸೋಂಕೆ ವಸ್ತ್ರ, ನೋಟವೆ ಕೂಟ, ಒಡನಾಟವೆ ಅಷ್ಟಭೋಗವೆನಗೆ.
ಉರಿಲಿಂಗದೇವನ ಕೂಟವೆ ಪರಾಪರ ವಾಙ್ಮನಾತೀತ ಪರಮಸುಖ.
Art
Manuscript
Music
Courtesy:
Transliteration
Imbina cumbana amr̥tāhāra, āliṅganave ābharaṇa,
sōṅke vastra, nōṭave kūṭa, oḍanāṭave aṣṭabhōgavenage.
Uriliṅgadēvana kūṭave parāpara vāṅmanātīta paramasukha.