Index   ವಚನ - 19    Search  
 
ಒಂದಲ್ಲ ಎರಡಲ್ಲ ಮೂವರು ಹೆಣ್ಣುಗಳ ಮರೆಯಲಿಪ್ಪನ ನೆರೆಯಲೆಂತಹುದು? ಹೆಣ್ಣಿನ ಮರೆಯ ಹೊಗುವ ನಲ್ಲಗೆ ಮತ್ತೆ ನಾಚಿಕೆಯಿಲ್ಲ ಕೇಳಾ, ಕೆಳದಿ. ಲೋಗರ ಪತಿಯ ಮರಸಿಕೊಂಡಿಪ್ಪ ಚಂಡಿಯರಿಗೆ ಮತ್ತೆ ನಾಚಿಕೆಯಿಲ್ಲ ಕೇಳಾ. ಅವದಿರ ಝಂಕಿಸಿ ತೊಲಗಿಸಿ ಹಿಡಿದಡೆ ಬಿಡದಿ[ರೆನೆ]ಂದೂ ಉರಿಲಿಂಗದೇವನ.