Index   ವಚನ - 26    Search  
 
ಕೂರ್ತಾಗ ಭಕ್ತ, ಮುನಿದಾಗ ಮಾನವ, ಪಾತಕ ನಾನೇತಕ್ಕೆ ಬಾತೆ? ಗೋಸುಂಬೆಯಂತೆ ಎನ್ನ ಮನ ಗಳಿಗೆಗೊಂದು ಪರಿ! ಈಶ್ವರಾ, ನಿಮ್ಮ ಭಕ್ತರ ಉದಾಸೀನವ ಮಾಡಿ ದಾಸೋಹವಿಲ್ಲದ ಅತಿದೂಷಕ ದ್ರೋಹಿ, ನಾನಯ್ಯಾ! ಬೇಸತ್ತೆನೀ ಮನಕ್ಕೆ, ಏಸು ಬುದ್ಧಿಯ ಹೇಳಿದಡೂ ಕೇಳುದು, ಈಶಾ, ಸಂತೈಸಯ್ಯಾ, ಉರಿಲಿಂಗದೇವಾ.