Index   ವಚನ - 31    Search  
 
ನಲ್ಲನ ಕೂಡುವನ್ನಕ್ಕ ಸುಖದ ಸುಗ್ಗಿಯನೇನೆಂದರಿಯೆ, ಕೇಳಾ ಕೆಳದಿ. ಸುಖದ ಸವಿಗೆ ಸ್ರವಿಸಿ ಕೂಡಿದೆ ನೋಡವ್ವ. ತವಕಕ್ಕೆ ತವಕ ಮಿಗೆ ಮೇಲುವರಿದು ಕೂಡಿದಂತೆ ಕೂಡುವೆನುರಿಲಿಂಗದೇವನ.