ನೀನೇ ಗತಿ ಎನಗಿನ್ನೊಂದರಿಯೆ,
ನೀ ನಡೆಸಲು ನಡೆವೆ, ನೀ ನುಡಿಸಲು ನುಡಿವೆ.
ನೀನಿಲ್ಲದರಿಯೆನು ಕೇಳಾ,
ನೀನೆ ಗತಿ ನೀನೆ ಮತಿ ಎನಗಯ್ಯಾ,
ನಿಮ್ಮಾಣೆ ಉರಿಲಿಂಗದೇವಾ.
Art
Manuscript
Music
Courtesy:
Transliteration
Nīnē gati enaginnondariye,
nī naḍesalu naḍeve, nī nuḍisalu nuḍive.
Nīnilladariyenu kēḷā,
nīne gati nīne mati enagayyā,
nim'māṇe uriliṅgadēvā.