Index   ವಚನ - 41    Search  
 
ಮಹಾಬೆಳಗಿನ ಲಿಂಗವ ಕೈಯಲ್ಲಿ ಕೊಟ್ಟಡೆ, ಕೊರಳಲ್ಲಿ ಕಟ್ಟಿಕೊಳ್ಳಲೇಕೆ? ನೋಡುವ ಕಣ್ಣು ಮುಚ್ಚಿದ ಮತ್ತೆ, ತನಗೆ ಎಡೆಯಾಟವುಂಟೆ? ಲಿಂಗವ ಹಿಂಗದೆ ಅಂಗೈಯಲ್ಲಿ ಕೊಟ್ಟ ಮತ್ತೆ, ಚಿತ್ತದಲ್ಲಿ ಹಿಂಗದಿರಬೇಕು. ಉರಿಲಿಂಗತಂದೆಯ ಸಿರಿಯ ಭಾಷೆ.