Index   ವಚನ - 5    Search  
 
ಆಯುಃ ಕಮಂ ಚ ವಿತ್ತಂ ಚ| ವಿದ್ಯಾ ನಿಧಾನಮೇವಚಃ| ಎಂದು ಇದಕಂಜಿ ಉಮ್ಮಳಿಸುವ ಮಾಯಾಪ್ರಸೂತ ಮನವ ನೋಡಾ! ಆಯುಷವೇ ಲಿಂಗ,ಶ್ರೀಯೆ ಜಂಗಮ, ನಿಧಾನವೇ ಸುಜ್ಞಾನ, ವಿದ್ಯವೆ ಶಿವಮಂತ್ರ, ದೇಹವೆ ದಾಸೋಹವೆಂಬುದು ಶ್ರೀ ಗುರು ಬರದನಾಗಿ ಹೊಟ್ಟೆಯ ಶಿಶುವಿಂಗೆ ಬೇರೆ ಬಟ್ಟಲ ಬಯಸಿದರೊಳರೆ ಮಹಾಘನ[ಸಿದ್ಧ]ಸೋಮೇಶ್ವರನಲ್ಲಿ ಅಯೋನಿಸಂಭವನಾದ ಶರಣಂಗೆ.