Index   ವಚನ - 18    Search  
 
ಜಟಾಜೂಟ ಮಕುಟಕೋಟಿಗಳಾದಡೇನು? ನೊಸಲ ಕಣ್ಣು ಚತುರ್ಭುಜದವರಾದಡೇನು? ಅಂಗದ ಮೇಲೆ ಲಿಂಗವಿಲ್ಲದವರ ಕಂಡಡೆ ಬರುಕಾಯರೆಂಬೆನು, ಬರುಮುಖರೆಂಬೆನು. ಸಿದ್ಧಸೋಮನಾಥಲಿಂಗವಾದೊಡೆಯು ನಮಗೇನು? ಕೊಂದಡೆ ಕೊಲಲಿ, ಇಂತೆಂಬುದ ಮಾಣೆನಯ್ಯಾ.