Index   ವಚನ - 29    Search  
 
ಸಾವಯನಲ್ಲ, ಸ್ವರೂಪ ಕುರುಹಿಡಿಯನಾಗಿ. ನಿರವಯನಲ್ಲ, ನಿರೂಪ ಭಾವಿಸನಾಗಿ. ದ್ವೈತಿಯಲ್ಲ, ಸೇವ್ಯಸೇವಕನೆಂಬ ಉಭಯವಳಿದುಳಿದನಾಗಿ. ಅದ್ವೈತಿಯಲ್ಲ, `ನಾಹಂ-ಕೋಹಂ-ಸೋಹಂʼವೆಂಬ ಭ್ರಮೆಯಳಿದುಳಿದನಾಗಿ. ಇಂತೀ ಸಕಲಭ್ರಮೆಯಳಿದು ಮಹಾಘನದಲ್ಲಿ ನಿಷ್ಪತಿಯಾಗಿಪ್ಪ ಸಿದ್ಧಸೋಮನಾಥಲಿಂಗಾ, ನಿಮ್ಮ ಶರಣ.