Index   ವಚನ - 12    Search  
 
ಚಂದ್ರಕಾಂತದ ಶಿಲೆಯಲ್ಲಿ ಬಿಂದು ಅಡಗಿಪ್ಪಂತೆ, ಗೋವುಗಳಲ್ಲಿ ಗೋರಂಜನ ರಂಜಿಸುವಂತೆ, ಶಿಲೆಕಾಷ್ಠಂಗಳಲ್ಲಿ ಅನಲ ಅಡಗಿಪ್ಪಂತೆ, ಸತ್ಯರ ಹೃದಯದಲ್ಲಿ ಮೌಕ್ತಿಕದ ಉದಕದಂತೆ ಭಾವವಿಲ್ಲದೆ ಅಡಗಿದೆಯಲ್ಲಾ ಅಮರೇಶ್ವರಲಿಂಗವೆ.