Index   ವಚನ - 5    Search  
 
ಎಲುವೊಡೆದು, ತನು ಕರಗಿ, ಮನವು ಝಜ್ಜರಂಬೋಗಿ, ಲಿಂಗದಲ್ಲಿ ನೀರು ನೀರಾಗಿ ಬೆರೆಸಲಿಬೇಕು, ಜಂಗಮದಲ್ಲಿ ವಾರಿಕಲ್ಲಾಗಿ ಕರಗಲಿಬೇಕು. ಸದ್ಗುರುವಿನೊಳು ಬೇರಿಲ್ಲದಂತೆ ಬೆರೆಸಬೇಕು. ಸರ್ವಾಂಗ ಪುಳಕಂಗಳೊಡೆದು ಕಡಲುಗಳಾಗಿ, ನಿರ್ವಾಣ ನಿಜಪದವೆಂದಪ್ಪುದೋ ಉಳಿಯುಮೇಶ್ವರಾ?