Index   ವಚನ - 11    Search  
 
ಬಸವಣ್ಣನೆ ಎನಗೆ ಗುರುಸ್ವರೂಪನಯ್ಯಾ, ಚೆನ್ನಬಸವಣ್ಣನೆ ಎನಗೆ ಲಿಂಗಸ್ವರೂಪನಯ್ಯಾ, ಸಿದ್ಧರಾಮಯ್ಯನೆ ಎನಗೆ ಜಂಗಮಸ್ವರೂಪನಯ್ಯಾ, ಮರುಳಶಂಕರದೇವರೆ ಎನಗೆ ಪ್ರಸಾದಸ್ವರೂಪನಯ್ಯಾ, ಪ್ರಭುದೇವರೆ ಎನಗೆ ಜ್ಞಾನಸ್ವರೂಪನಯ್ಯಾ. ಇಂತಿವರ ಶ್ರೀಪಾದದಲ್ಲಿ ಉರಿಯುಂಡ ಕರ್ಪುರದಂತಡಗಿದೆನಯ್ಯಾ ಉಳಿಯುಮೇಶ್ವರಾ.