ಕಾಯಕ್ಕೆ ಕರಣಂಗಳಿಲ್ಲ,
ಜೀವಕ್ಕೆ ಇಂದ್ರಿಯಗಳಿಲ್ಲ.
ಅದೆಂತೆಂದಡೆ:
ಕಾಯಕ್ಕೂ ಜೀವಕ್ಕೂ ಇಂದ್ರಿಯಂಗಳ ಬೆಂಬಳಿಯಲ್ಲಿ,
ಸಂಗಗುಣದಲ್ಲಿ ಘಟಜೀವದ ಬೆಂಬಳಿಯನರಿದು,
ಸಂಚಿನ ಸಂಬಂಧದಿಂದ ಘಟಕರಚರಣಾದಿಗಳೆಲ್ಲ
ಅವಯವಂಗಳ ಸಂಚಿನ ಭೇದದಿಂದ ಮಿಂಚುವುದನರಿದು
ಅವಗತ ಸಂಚವನರಿದವಂಗೆ ಗಾರುಡೇಶ್ವರಲಿಂಗವು ಸಾಧ್ಯವಲ್ಲ.
Art
Manuscript
Music
Courtesy:
Transliteration
Kāyakke karaṇaṅgaḷilla,
jīvakke indriyagaḷilla.
Adentendaḍe:
Kāyakkū jīvakkū indriyaṅgaḷa bembaḷiyalli,
saṅgaguṇadalli ghaṭajīvada bembaḷiyanaridu,
san̄cina sambandhadinda ghaṭakaracaraṇādigaḷella
avayavaṅgaḷa san̄cina bhēdadinda min̄cuvudanaridu
avagata san̄cavanaridavaṅge gāruḍēśvaraliṅgavu sādhyavalla.